Caring for the Voice

World Voice Day

 

ನಿಮ್ಮ ಧ್ವನಿಯ ಆರೈಕೆ: ವೃತ್ತಿಪರ ಧ್ವನಿ ಬಳಕೆದಾರರಿಗೆ ಮಾರ್ಗದರ್ಶಿ(ಮಾರ್ಗದರ್ಶನ)

ಏಪ್ರಿಲ್ 16ರಂದು ವಿಶ್ವದಾದ್ಯಂತ “ವಿಶ್ವ ಧ್ವನಿ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.  2025 ರ ವಿಶ್ವ ಧ್ವನಿ ದಿನದ ಥೀಮ್ “ನಿಮ್ಮ ಧ್ವನಿಯನ್ನು ಸಬಲೀಕರಣಗೊಳಿಸಿ”.  ಈ ದಿನಾಚರಣೆಯ ಅಂಗವಾಗಿ ಧ್ವನಿಯ ಆರೋಗ್ಯ ಮತ್ತು ಉತ್ತಮ ಧ್ವನಿಯ ಅಭ್ಯಾಸಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ. ಈ ಥೀಮ್ ವ್ಯಕ್ತಿಗಳು ತಮ್ಮ ಧ್ವನಿಯ ಯೋಗಕ್ಷೇಮದ ಬಗ್ಗೆ ಕಲಿಯಲು ಮತ್ತು ನಿರ್ವಹಿಸಲು ಪ್ರೋತ್ಸಾಹಿಸುತ್ತದೆ.

ನಿಮ್ಮ ಧ್ವನಿ ಕೇವಲ ಶಬ್ದಕ್ಕಿಂತಲೂ ಹೆಚ್ಚಿನದು. ನಿಮ್ಮ ಧ್ವನಿಯು ನಿಮ್ಮ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ.  ನೀವು ಮಾತನಾಡುವ ಧ್ವನಿಯು ನಿಮ್ಮ ಸಂವಹನಕ್ಕಾಗಿ ಅತ್ಯಂತ ಅವಶ್ಯಕವಾದ ಸಾಧನವಾಗಿದೆ,  ಅದರಲ್ಲೂ ಪ್ರಮುಖವಾಗಿ,  ಶಿಕ್ಷಕ, ಗಾಯಕ, ನಟ, ವಕೀಲ, ಕಾಲ್ ಸೆಂಟರ್ ಕೆಲಸಗಾರ ಅಥವಾ ಭಾಷಣಕಾರರಾಗಿದ್ದು, ನೀವು ವೃತ್ತಿಪರ ಧ್ವನಿ ಬಳಕೆದಾರರಾಗಿದ್ದರೆ ನಿಮ್ಮ ಜೀವನೋಪಾಯವು ನಿಮ್ಮ ಧ್ವನಿಯ ಕಾರ್ಯ ನಿರ್ವಹಣೆಯ ಮೇಲೆ ಅವಲಂಬಿಸಿರಬಹುದು. ನಿಮ್ಮ ಧ್ವನಿಯನ್ನು ಕಾಪಾಡಿಕೊಳ್ಳುವುದು, ದೈಹಿಕ ಸದೃಢತೆಯನ್ನು ಕಾಪಾಡಿಕೊಳ್ಳುವಷ್ಟೇ ಮುಖ್ಯವಾಗಿದೆ. ಈ ಮಾರ್ಗದರ್ಶಿಯು, ನಿಮ್ಮ ಧ್ವನಿಯು ಹೇಗೆ ಕಾರ್ಯನಿರ್ವಹಿಸುತ್ತದೆ, ಧ್ವನಿ ಸಮಸ್ಯೆಗಳಿಗೆ ಕಾರಣವೇನು ಮತ್ತು ಅದನ್ನು ರಕ್ಷಿಸಲು, ಮತ್ತು ಸಂರಕ್ಷಿಸಲು ನೀವು ಏನನ್ನು ಮಾಡಬಹುದು ಎಂಬುದನ್ನು ವಿವರಿಸುತ್ತದೆ.

ನಿಮ್ಮ ಧ್ವನಿಯು ಹೇಗೆ ಹೊರಡುತ್ತದೆ?

ನಿಮ್ಮ ಶ್ವಾಸಕೋಶದಿಂದ ಗಾಳಿಯು ಧ್ವನಿಪೆಟ್ಟಿಗೆಯಲ್ಲಿರುವ ಧ್ವನಿ ಪದರುಗಳ (vocal cords) ಮೂಲಕ ಹಾದುಹೋದಾಗ, ಈ ಧ್ವನಿ ಮಡಿಕೆಗಳು ಕಂಪಿಸಿ ನಿಮ್ಮ ಧ್ವನಿ ಉತ್ಪತ್ತಿಯಾಗುತ್ತದೆ, ಈ ಕಂಪನಗಳನ್ನು ನಾಲಿಗೆ, ತುಟಿಗಳು ಮತ್ತು ಅಂಗುಳಿನ ಚಲನೆಗಳಿಂದ ವಾಕ್ ಶಕ್ತಿಯಾಗಿ ರೂಪುಗೊಳ್ಳುತ್ತದೆ.

ನಿಮ್ಮ ಧ್ವನಿಯ ಗುಣಮಟ್ಟವು ಈ ಕೆಳಗಿನ ಅಂಶಗಳ ಮೇಲೆ ಅವಲಂಬಿಸಿರುತ್ತದೆ:

  • ಆರೋಗ್ಯಕರ ಧ್ವನಿ ಪದರುಗಳು (vocal cords).
  • ಉತ್ತಮ ಶ್ವಾಸದ (ಉಸಿರಾಟ) ಬೆಂಬಲ.
  • ಸರಿಯಾದ ಸಮನ್ವಯತೆ ಮತ್ತು ಉಚ್ಚಾರಣೆ.

ಈ ಸಂಪೂರ್ಣ ವ್ಯವಸ್ಥೆಯ ಯಾವುದೇ ಭಾಗವು ಒತ್ತಡಕ್ಕೊಳಗಾಗಿದ್ದರೆ ಅಥವಾ ಹಾನಿಗೊಳಗಾದರೆ, ಧ್ವನಿಯ ಗುಣಮಟ್ಟವು ಹಾಳಾಗುತ್ತದೆ.

ಯಾರು ತೊಂದರೆಗೊಳಗಾಗಬಹುದು?

ಕೆಲವು ವೃತ್ತಿಗಳು ಧ್ವನಿಯ ಮೇಲೆ ಹೆಚ್ಚಿನ ಒತ್ತನ್ನು ನೀಡುತ್ತವೆ. ಇದು ಧ್ವನಿ ಮಡಿಕೆಗಳ ಮೇಲೆ ಒತ್ತಡ ಅಥವಾ ಗಾಯದ ಅಪಾಯವನ್ನು ಹೆಚ್ಚಿಸುತ್ತದೆ. ನೀವು ಈ ಕೆಳಗಿನವುಗಳಲ್ಲಿ ತೊಡಗಿಸಿಕೊಂಡರೆ ನೀವು ತೊಂದರೆಗೊಳಗಾಗ ಬಹುದು:

  • ವಿಶ್ರಾಂತಿ ಇಲ್ಲದೆ ದೀರ್ಘಕಾಲ ಮಾತನಾಡುವುದು.
  • ಗದ್ದಲದ ವಾತಾವರಣದಲ್ಲಿ ಜೋರಾಗಿ ಧ್ವನಿಯನ್ನು ಬಳಸಿದರೆ.
  • ಆಗಾಗ್ಗೆ ಅನುಚಿತ ಅಥವಾ ತಪ್ಪು ವಿಧದಲ್ಲಿ ಹಾಡುವುದು.
  • ಶೀತ ಅಥವಾ ಗಂಟಲಿನ ನೋವು ಅಥವಾ ಅನಾರೋಗ್ಯದಿಂದ ಬಳಲುತ್ತಿರುವಾಗ ಧ್ವನಿಯನ್ನು ಅತಿ ಹೆಚ್ಚು ಬಳಕೆ ಮಾಡಿದರೆ.
  • ನಿಯತವಾಗಿ ಧೂಮಪಾನ ಮಾಡುವುದು ಅಥವಾ ಮದ್ಯಪಾನ ಮಾಡುವುದು
  • ಧೂಳು ಅಥವಾ ಹೊಗೆಯಂತಹ ಪರಿಸರಗೇಡಿಗಳಿಗೆ ಒಡ್ಡಿಕೊಂಡಾಗ

ಸಾಮಾನ್ಯ ಧ್ವನಿ ಸಮಸ್ಯೆಗಳ ಗುಣ ಲಕ್ಷಣಗಳು

ವೃತ್ತಿಪರರಲ್ಲಿ ಕಂಡುಬರುವ ಕೆಲವು ವಿಶಿಷ್ಟ ಧ್ವನಿಯ ತೊಂದರೆಯ ಲಕ್ಷಣಗಳು

  • ಕರ್ಕಶತೆ.
  • ಧ್ವನಿಯಲ್ಲಿ ಒಡಕುತನ.
  • ಧ್ವನಿಯಲ್ಲಾಗುವ ಆಯಾಸ.
  • ಧ್ವನಿಯ ಮಟ್ಟ ಅಥವಾ ಶ್ರೇಣಿಯನ್ನು ಕಡಿಮೆಮಾಡುವುದು.
  • ಸಂಪೂರ್ಣವಾಗಿ ಧ್ವನಿ ನಿಂತು ಹೋಗುವುದು.

ಈ ಸಮಸ್ಯೆಗಳು ಧ್ವನಿ ಮಡಿಕೆಗಳ ಊತ ಅಥವಾ ಗಂಟುಗಳು, ದುರ್ಮಾಂಸ, ಸ್ನಾಯು ಸೆಳೆತದ ಧ್ವನಿ ಒಡಕುತನ, ಅಥವಾ ಧ್ವನಿ ಪೆಟ್ಟಿಗೆಯ ಉರಿಯೂತ ಉಂಟಾಗಬಹುದು.

ಎರಡು ವಾರಗಳಿಗಿಂತ ಹೆಚ್ಚು ಕಾಲ ಈ ಮೇಲಿನ ರೋಗಲಕ್ಷಣಗಳು ಮುಂದುವರಿದರೆ, ಕಿವಿ, ಮೂಗು ಮತ್ತು ಗಂಟಲು ತಜ್ಞರು ಸಂಪರ್ಕಿಸುವುದು ಅತ್ಯಗತ್ಯ

ವೃತ್ತಿಪರ ಧ್ವನಿ ಆರೈಕೆಗಾಗಿ ಸಲಹೆಗಳು

  • ಜಲ ಸೇವನೆ ಪ್ರಮುಖವಾಗಿದೆ: ಧ್ವನಿ ಮಡಿಕೆಗಳನ್ನು ನಯವಾಗಿಡಲು ಪ್ರತಿದಿನ ಕನಿಷ್ಠ 8–10 ಗ್ಲಾಸ್ ನೀರು ಕುಡಿಯಿರಿ.
  • ಅತಿಯಾದ ಕಾಫಿ ಮತ್ತು ಆಲ್ಕೋಹಾಲ್ ಸೇವನೆಯನ್ನು ತಪ್ಪಿಸಿ, ಏಕೆಂದರೆ ಇದು ಧ್ವನಿ ಮಡಿಕೆಗಳ ಮತ್ತು ದೇಹದ ನಿರ್ಜಲೀಕರಣಕ್ಕೆ ಕಾರಣವಾಗಬಹುದು.
  • ಪ್ರದರ್ಶನ, ಹಾಡುವ ಅಥವಾ ಉಪನ್ಯಾಸಗಳ ಮೊದಲು ಸೌಮ್ಯವಾದ ಗಾಯನ ಅಭ್ಯಾಸಗಳನ್ನು(ಅಭ್ಯಾಸವನ್ನು) ಮಾಡಿ.
  • ಕ್ರೀಡಾಪಟುಗಳು ಆಟಕ್ಕೆ ಮುನ್ನ ಮಾಂಸಖಂಡಗಳನ್ನು ಹೇಗೆ ಹಿಗ್ಗಿಸಿ ಸಿದ್ಧತೆಗೊಳ್ಳುತ್ತಾರೋ, ಹಾಗೆಯೇ ನಿಮ್ಮ ಧ್ವನಿಗೂ ಸಿದ್ಧತೆಯ ಅಗತ್ಯವಿದೆ.
  • ಸರಳವಾದ ಈ ಧ್ವನಿಯ ವ್ಯಾಯಾಮಗಳನ್ನು ಮಾಡಬಹುದು:
  • ಕೆಲವು ನಿಮಿಷಗಳ ಕಾಲ ನಿಧಾನವಾಗಿ ರಾಗಗಳನ್ನು ಗುನುಗುವುದು
  • ಆರಾಮವಾಗಿರುವ ತುಟಿಗಳ ಮೂಲಕ ಗಾಳಿಯನ್ನು ಊದಿ, ಕಂಪಿಸುವ ಶಬ್ದವನ್ನು ಸೃಷ್ಟಿಸುವುದು.
  • ಧ್ವನಿಯನ್ನು ನಿಧಾನವಾಗಿ ಕಡಿಮೆ ಸ್ವರದಿಂದ ಹೆಚ್ಚಿನ ಸ್ವರಗಳಿಗೆ ಹೆಚ್ಚಿಸುವುದು.
  • “ಮ್ಮ್” ಅಥವಾ “ನ್ಗ್” ನಂತಹ ಸೌಮ್ಯ ಶಬ್ದಗಳನ್ನು ಹೊರಡಿಸುವುದು. ಈ ಅಭ್ಯಾಸಗಳು ಮೃದು ಮತ್ತು ಆರಾಮದಾಯಕವಾಗಿರಬೇಕು – ಬಲವಂತವಾಗಿರಬಾರದು. ವಿಶೇಷವಾಗಿ ಬೋಧನೆ, ಹಾಡುಗಾರಿಕೆ ಅಥವಾ ಸಾರ್ವಜನಿಕ ಭಾಷಣ ಮಾಡುವ ಮೊದಲು ಪ್ರತಿದಿನ ಅವುಗಳನ್ನು ಮಾಡುವುದರಿಂದ ನಿಮ್ಮ ಧ್ವನಿಯನ್ನು ಸಿದ್ಧಪಡಿಸುತ್ತದೆ ಮತ್ತು ನಿಮ್ಮ(ನೀವು) ಅತ್ಯುತ್ತಮ ಪ್ರದರ್ಶನ ನೀಡಲು ಸಹಾಯ ಮಾಡುತ್ತದೆ.

ಈ ಕೆಳಗಿನ ಆರೋಗ್ಯಕರ ಅಭ್ಯಾಸಗಳ ಮೂಲಕ ಧ್ವನಿಯ  ನೈರ್ಮಲ್ಯತೆಯನ್ನು ಕಾಪಾಡಿಕೊಳ್ಳಿ

  • ಕೂಗಾಡುವುದು ಅಥವಾ ಪಿಸುಗುಟ್ಟುವುದನ್ನು ತಪ್ಪಿಸಿ, ಇವೆರಡೂ ನಿಮ್ಮ ಧ್ವನಿಯ ಮೇಲೆ ಒತ್ತಡವನ್ನು ಉಂಟಾಕಬಹುದು.
  • ದೊಡ್ಡದಾದ ಅಥವಾ ಗದ್ದಲದ ಸ್ಥಳಗಳಲ್ಲಿ ಖಡ್ಡಾಯವಾಗಿ ಮೈಕ್ರೊಫೋನ್‍ಗಳನ್ನು ಬಳಸಿ.
  • ಧೀರ್ಘಕಾಲ ಧ್ವನಿ ಬಳಕೆಯ ಸಮಯದಲ್ಲಿ ಆಗಾಗ್ಗೆ ನಿಮ್ಮ ಧ್ವನಿಗೆ ವಿರಾಮವನ್ನು ಕೊಡಿ.
  • ಸರಿಯಾದ ರೀತಿಯಲ್ಲಿ ಉಸಿರಾಡಿ. ಉತ್ತಮ ಉಸಿರಾಟದ ನಿಯಂತ್ರಣಕ್ಕಾಗಿ ಡಯಾಫ್ರಾಗ್ಮ್ಯಾಟಿಕ್ (diaphragmatic) ಉಸಿರಾಟವನ್ನು ಕಲಿಯಿರಿ
  • ಕಿರಿದಾದ ಉಸಿರಾಟದ ಮೇಲೆ ಮಾತನಾಡುವುದು ಅಥವಾ ಹಾಡುವುದನ್ನು ತಪ್ಪಿಸಿ.
  • ಗಂಟಲು ಕಿರಿ ಕಿರಿ ಇದ್ದಾಗ, ಪದೇ ಪದೇ ಕೆಮ್ಮಿ ಗಂಟಲು ಸ್ವಚ್ಛಗೊಳಿಸುವುದನ್ನು ನಿಲ್ಲಿಸಿ
  • ಬದಲಾಗಿ, ಗಂಟಲಿನ ಕಿರಿಕಿರಿಯನ್ನು ನಿವಾರಿಸಲು ತುಸು ಬಿಸಿ ನೀರನ್ನು ಕುಡಿಯಿರಿ.
  • ದೀರ್ಘಕಾಲದ ಕೆಮ್ಮು ಮತ್ತು ಗಂಟಲು ಸ್ವಚ್ಛಗೊಳಿಸುವಿಕೆಯಿಂದ ಧ್ವನಿ ಪದರುಗಳಿಗೆ ಹಾನಿಯನ್ನುಂಟುಮಾಡಬಹುದು.
  • ನಿಮ್ಮ ಸಾಮಾನ್ಯ ಆರೋಗ್ಯವನ್ನು ಕಾಪಾಡಿಕೊಳ್ಳಿ
  • ಅಸಿಡಿಟಿ ಅಥವಾ ಅಮ್ಲೀಯತೆ (GERD), ಅಲರ್ಜಿಗಳು ಮತ್ತು ಸೈನಸ್ ಸೋಂಕುಗಳಿಗೆ ತಕ್ಷಣ ಚಿಕಿತ್ಸೆ ಪಡೆದುಕೊಳ್ಳಿ
  • ಸಾಕಷ್ಟು ನಿದ್ರೆಯನ್ನು ಮಾಡಿ, ಮತ್ತು ದೈನಂದಿನ ಒತ್ತಡಗಳನ್ನು ನಿರ್ವಹಿಸಿ, ಇವು ಕುತ್ತಿಗೆ ಮತ್ತು ಧ್ವನಿಪೆಟ್ಟಿಗೆಯ ಸ್ನಾಯುಗಳನ್ನು ಬಿಗಿಗೊಳಿಸುತ್ತವೆ.

ವೃತ್ತಿಪರ ಧ್ವನಿ ಬಳಕೆದಾರರು ತಮ್ಮ ಆಹಾರಕ್ರಮದ ಬಗ್ಗೆ ಜಾಗರೂಕರಾಗಿರಬೇಕು, ಏಕೆಂದರೆ ಕೆಲವು ಆಹಾರಗಳು ಮತ್ತು ಪಾನೀಯಗಳು ಧ್ವನಿಯ್ ಗುಣಮಟ್ಟ, ಜಲಸಂಚಯನದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಅಥವಾ ಧ್ವನಿಯ ಶತ್ರುಗಳಲ್ಲಿ ಒಂದಾದ ಆಮ್ಲ ಗಂಟಲಿಗೇರುವ ಅಥವಾ ಹಿಮ್ಮುಖ ಹರಿಯುವ (LPRD) ಅಪಾಯವನ್ನು ಹೆಚ್ಚಿಸಬಹುದು.

ಹೆಚ್ಚು ಮಾತನಾಡುವ, ಭಾಷಣ ಮಾಡುವ ಅಥವಾ ಹಾಡುವ ಮೊದಲು ಏಕೆ ತ್ಯಜಿಬೇಕಾದ ಅಥವಾ ಮಿತಿಗೊಳಿಸಬೇಕಾದ ಆಹಾರ ಮತ್ತು ಪಾನೀಯಗಳ ಪಟ್ಟಿ ಇಲ್ಲಿದೆ:

  1. ಎಣ್ಣೆಯಲ್ಲಿ ಹುರಿದ ಮತ್ತು ಕೊಬ್ಬಿನ ಆಹಾರಗಳು
  • ಏಕೆ ತ್ಯಜಿಸಬೇಕು: ಅವು ಈ ಈ ಆಹಾರಗಳು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತವೆ ಮತ್ತು ಆಮ್ಲ ಹಿಮ್ಮುಖ ಹರಿವಿನ (GERD) ಅಪಾಯವನ್ನು ಹೆಚ್ಚಿಸುತ್ತವೆ, ಇದು ಗಾಯನ(ಧ್ವನಿ) ಪದರುಗಳನ್ನು ಕೆರಳಿಸಬಹುದು ಮತ್ತು ಊತವನ್ನು ಹೆಚ್ಚಿಸಬಹುದು.
  1. ಚಾಕೊಲೇಟ್
  • ಏಕೆ ತ್ಯಜಿಸಬೇಕು: ಈ ಪದಾರ್ಥಗಳು ಕೆಫೀನ್ ಅನ್ನು ಹೊಂದಿರುತ್ತದೆ ಮತ್ತು ಕೆಳ ಅನ್ನನಾಳದ ತಡೆಬಾಗಿಲನ್ನು (Sphincter)ಅನ್ನು ಸಡಿಲಗೊಳಿಸಿ ಆಮ್ಲ ಹಿಮ್ಮುಖ ಹರಿವಿನ (GERD) ಅಪಾಯವನ್ನು ಉತ್ತೇಜಿಸುತ್ತದೆ.
  • ಜೊತೆಗೆ ಗಂಟಲಿನ ಲೋಳೆಯ ಸಾಂದ್ರತೆಯನ್ನು ಹೆಚ್ಚಿಸುತ್ತದೆ. ಇದು ಧ್ವನಿಯ ಸ್ಪಷ್ಟತೆಗೆ ಅಡ್ಡಿಯಾಗಬಹುದು.
  1. ಕೆಫೀನ್‍ನಿಂದ ಮಾಡಿದ ಪಾನೀಯಗಳು
  • ಏಕೆ ತ್ಯಜಿಸಬೇಕು: ಕೆಫೀನ್ ಒಂದು ಮೂತ್ರವರ್ಧಕವಾಗಿದ್ದು, ದೇಹದ ಜಲ ಅಥವಾ ದ್ರವ ನಷ್ಟವನ್ನು ಉತ್ತೇಜಿಸುತ್ತದೆ ಮತ್ತು ಧ್ವನಿ ಪದರುಗಳನ್ನು ಒಣಗಿಸುವ ಸಾಧ್ಯತೆಯಿದೆ.
  1. ಮದ್ಯಪಾನ
  • ಏಕೆ ತ್ಯಜಿಸಬೇಕು: ಕೆಫೀನ್‌ನಂತೆ, ಆಲ್ಕೋಹಾಲ್ ಕೂಡ ನಿರ್ಜಲೀಕರಣಗೊಳಿಸುತ್ತದೆ ಮತ್ತು ನರಗಳ ಹೊ೦ದಾಣಿಕೆಯನ್ನು ಮಂದಗೊಳಿಸುತ್ತದೆ, ಧ್ವನಿಯ ಸ್ಥರ ನಿಯಂತ್ರಣ ಮತ್ತು ಧ್ವನಿ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ.
  • ಇದು ಆಮ್ಲಗಳ ಹಿಮ್ಮುಖ ಹರಿವನ್ನು (LPRD) ಸಹ ಉತ್ತೇಜಿಸಬಹುದು.
  1. ಹಾಲಿನ ಉತ್ಪನ್ನಗಳು ಹೆಚ್ಚುವರಿಯಾಗಿ ಉಪಯೋಗಿಸುವುದು
  • ಏಕೆ ತ್ಯಜಿಸಬೇಕು: ಕೆಲವು ವ್ಯಕ್ತಿಗಳಿಗೆ, ಹಾಲಿನ ಉತ್ಪನ್ನಗಳು ಗಂಟಲಿನ ಲೋಳೆಯ ಸಾಂದ್ರತೆಯನ್ನು  ಅಥವಾ ಗಂಟಲಿನಲ್ಲಿ ಕಫದ ತೀವ್ರತೆಯನ್ನು ಹೆಚ್ಚಿಸಬಹುದು.
  1. ಆಮ್ಲೀಯತೆನ್ನು ಹೆಚ್ಚು ಹೊಂದಿದ ಆಹಾರಗಳು ಮತ್ತು ಸಿಟ್ರಸ್ ಹಣ್ಣುಗಳು
  • ಏಕೆ ತ್ಯಜಿಸಬೇಕು: ಹೆಚ್ಚು ಆಮ್ಲೀಯ ವಸ್ತುಗಳು ಆಮ್ಲಗಳ ಹಿಮ್ಮುಖ ಹರಿವನ್ನು (LPRD) ಅನ್ನು ಉಲ್ಬಣಗೊಳಿಸಬಹುದು ಅಥವಾ ಗಂಟಲಿನ ಕಿರಿಕಿರಿಯನ್ನು ಉಂಟುಮಾಡಬಹುದು.

ಉದಾ: ಕಿತ್ತಳೆ, ನಿಂಬೆಹಣ್ಣು, ಟೊಮೆಟೊ, ವಿನೆಗರ್ ಆಧಾರಿತ ಆಹಾರಗಳು.

  1. ಮಸಾಲೆಯುಕ್ತ ಆಹಾರಗಳು

ಏಕೆ ತ್ಯಜಿಸಬೇಕು: ಅವು ಆಮ್ಲಗಳ ಹಿಮ್ಮುಖ ಹರಿವನ್ನು (LPRD) ಅನ್ನು ಪ್ರಚೋದಿಸಬಹುದು ಅಥವಾ ಗಂಟಲಿನ ಕಿರಿಕಿರಿಯನ್ನು ಉಂಟುಮಾಡಬಹುದು, ಇದು ಕೆಮ್ಮು ಅಥವಾ ಧ್ವನಿ ಅಡಚಣೆಗೆ ಕಾರಣವಾಗಬಹುದು.

  1. ತುಂಬಾ ತಂಪಾದ ಪಾನೀಯಗಳು
  • ಏಕೆ ತ್ಯಜಿಸಬೇಕು: ಧ್ವನಿ ಪದರುಗಳು ಮತ್ತು ಸ್ನಾಯುಗಳಿಗೆ ಆಘಾತವನ್ನು ಉಂಟುಮಾಡಬಹುದು, ಇದು ಒತ್ತಡ ಅಥವಾ ಕಡಿಮೆ ನಮ್ಯತೆಗೆ ಕಾರಣವಾಗಬಹುದು. ಉಗುರು ಬೆಚ್ಚಗಿನ ಅಥವಾ ಕೋಣೆಯ ಉಷ್ಣಾಂಶದ ನೀರು ಸೂಕ್ತವಾಗಿದೆ.

ತಜ್ಞರ ಸಲಹೆ

ಮೇಲಿನ ಪದಾರ್ಥಗಳ ಬದಲಾಗಿ, ಕೋಣೆಯ ಉಷ್ಣಾಂಶದ ನೀರನ್ನು ಕುಡಿಯಲು ಬಳಸುವುದು, ಗಿಡಮೂಲಿಕೆ ಚಹಾಗಳನ್ನು (ಶುಂಠಿ ಅಥವಾ ಚಕ್ಕೆ) ಬಳಸಿ, ಮತ್ತು  ಧ್ವನಿ ಬಳಸುವ ಚಟುವಟಿಕೆಗೆ ಮೊದಲು ಹಗುರವಾದ, ಸುಲಭವಾಗಿ ಜೀರ್ಣವಾಗುವ ಊಟವನ್ನು ಆರಿಸಿಕೊಳ್ಳಿ.

ತಜ್ಞರನ್ನು ಯಾವಾಗ ಭೇಟಿಯಾಗಬೇಕು?

ಈ ಕೆಳಗಿನ ಸಂದರ್ಭಗಳಲ್ಲಿ ಕಿವಿ, ಮೂಗು ಮತ್ತು ಗಂಟಲು ಅಥವಾ ಧ್ವನಿ ತಜ್ಞರನ್ನು ಭೇಟಿ ಮಾಡಿ:

  • ಕರ್ಕಶ ಅಥವಾ ಒಡಕು ಧ್ವನಿಯು 2 ವಾರಗಳಿಗಿಂತ ಹೆಚ್ಚು ಕಾಲ ಇದ್ದರೆ
  • ಧ್ವನಿ ಬದಲಾವಣೆಗಳು ಇದ್ದಕ್ಕಿದ್ದಂತೆ ಸಂಭವಿಸಿದರೆ.
  • ಮಾತನಾಡುವಾಗ ಅಥವಾ ಹಾಡುವಾಗ ನಿಮಗೆ ನೋವುನಿಸುತ್ತಿದ್ದರೆ
  • ನೀವು ಆಗಾಗ್ಗೆ ನಿಮ್ಮ ಧ್ವನಿಯನ್ನು ಕಳೆದುಕೊಳ್ಳುತ್ತಿದ್ದರೆ.

ಸಂಪೂರ್ಣ ಕಿವಿ, ಮೂಗು ಮತ್ತು ಗಂಟಲಿನ ತಪಾಸಣೆಯ ಜೊತೆಗೆ ಧ್ವನಿ ಪೆಟ್ಟಿಗೆಯ ಅಂತರ್ದರ್ಶಕ (Videolaryngoscopy) ಅಥವಾ ವೀಡಿಯೊ ಧ್ವನಿಪದರುಗಳ ಕಂಪನ ದರ್ಶಕ (Videostroboscopy) ಯೊಂದಿಗೆ ನಿಮ್ಮ ಧ್ವನಿ ಪದರುಗಳ ಚಲನೆ ಮತ್ತು ಕಂಪನಗಳ ಮೌಲ್ಯಮಾಪನ ಅಗತ್ಯವಾಗಬಹುದು.

ಧ್ವನಿ ಚಿಕಿತ್ಸೆ ಮತ್ತು ಪುನರ್ವಸತಿ

ಧ್ವನಿ ತರಬೇತಿ ಹೊಂದಿರುವ ವಾಕ್ ಮತ್ತು ಭಾಷಾ ತಜ್ಞರು ನಿಮಗೆ ಈ ಕೆಳಗಿನ ಸಲಹೆಗಳ ಮೂಲಕ ಮಾರ್ಗದರ್ಶನ ನೀಡಬಹುಲ್ದು:

  • ಧ್ವನಿಯ ದುರುಪಯೋಗವನ್ನು ಕಡಿಮೆ ಮಾಡಿ, ನಿಮ್ಮ ಧ್ವನಿಯನ್ನು ಸರಿಯಾದ ಕ್ರಮದಲ್ಲಿ ಧ್ವನಿ ತರಬೇತಿ.
  • ಧ್ವನಿಯನ್ನು ಬಲಪಡಿಸಲು ಮತ್ತು ಸಮತೋಲನ ಕಾಪಾಡಿಕೊಳ್ಳಲು ಧ್ವನಿಯ ವ್ಯಾಯಾಮಗಳು
  • ಅನುರಣನ ಧ್ವನಿ ತರಬೇತಿ (Resonant Voice Therapy), ಅಥವಾ ಅಥವಾ ಧ್ವನಿ ಪೆಟ್ಟಿಗೆಯ ವ್ಯಾಯಾಮಗಳು (semi-occluded vocal tract exercises). ಇವು ಸೌಮ್ಯವಾದರೂ ಪರಿಣಾಮಕಾರಿ.

ವೃತ್ತಿಪರ ಧ್ವನಿ ಬಳಕೆದಾರರು: ವಿಶೇಷ ಪರಿಗಣನೆಗಳು

  • ಗಾಯಕರು ಧ್ವನಿ ತರಬೇತುದಾರರೊಂದಿಗೆ ಸರಿಯಾದ ಕ್ರಮವನ್ನು ಕಲಿಯಬೇಕು ಮತ್ತು ಅನಾರೋಗ್ಯದಿಂದ ಬಳಲುತ್ತಿರುವಾಗ ಪ್ರದರ್ಶನ ನೀಡುವುದನ್ನು ತಪ್ಪಿಸಬೇಕು.
  • ಶಿಕ್ಷಕರು ಮತ್ತು ಭಾಷಣಕಾರರು ಧ್ವನಿಯ ಮೇಲಿನ ಒತ್ತಡವನ್ನು ಕಡಿಮೆ ಮಾಡಲು, ಧ್ವನಿವರ್ಧಕಗಳನ್ನು ಬಳಸಬೇಕು.
  • ಕಾಲ್ ಸೆಂಟರ್ ಏಜೆಂಟ್‌ಗಳು ತಮ್ಮ ಕರೆಗಳ ಅಂತರವನ್ನು ಹೆಚ್ಚಿಸಬೇಕು, ಮತ್ತು ಧ್ವನಿಯಮೇಲಿನ ಒತ್ತಡವನ್ನು ತಪ್ಪಿಸಲು ಹೆಡ್‌ಸೆಟ್‌ಗಳನ್ನು ಬಳಸಬೇಕು.

ರೋಗ ತಡೆಗಟ್ಟುವಿಕೆ ಯಾವಾಗಲೂ ಚಿಕಿತ್ಸೆಗಿಂತ ಉತ್ತಮ. ನಿಮ್ಮ ವೃತ್ತಿಜೀವನದ ಆರಂಭದಲ್ಲಿ ಆರೋಗ್ಯಕರ ಧ್ವನಿ ಅಥವಾ ಗಾಯನ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದರಿಂದ ದೀರ್ಘಕಾಲೀನ ಸಮಸ್ಯೆಗಳನ್ನು ತಡೆಯಬಹುದು

ಸಾರಾಂಶ

ನಿಮ್ಮ ಧ್ವನಿಯು ನಿಮ್ಮ ಅಮೂಲ್ಯವಾದ ಆಸ್ತಿಯಾಗಿದೆ. ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವ ಮೂಲಕ ಮತ್ತು ಅದನ್ನು ರಕ್ಷಿಸಲು ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ, ನೀವು ದೀರ್ಘಕಾಲೀನ ಧ್ವನಿ ಆರೋಗ್ಯ ಮತ್ತು ಗರಿಷ್ಠ ಕಾರ್ಯಕ್ಷಮತೆಯನ್ನು ಖಚಿತಪಡಿಸಿಕೊಳ್ಳಬಹುದು. ನಿಯತವಾಗಿ ಧ್ವನಿ ಆರೈಕೆ, ಸಮಸ್ಯೆಗಳ ಆರಂಭಿಕ ಗುರುತಿಸುವಿಕೆ ಮತ್ತು ತಜ್ಞರ ಮಾರ್ಗದರ್ಶನವು ನಿಮ್ಮ ಧ್ವನಿಯನ್ನು ಬಲವಾಗಿ, ಸ್ಪಷ್ಟವಾಗಿ ಮತ್ತು ವಿಶ್ವಾಸಾರ್ಹವಾಗಿಡಲು ಪ್ರಮುಖವಾಗಿದೆ.

ಡಾ: ಪ್ರಹ್ಲಾದ ಎನ್. ಬಿ.
ಕರ್ನಾಟಕ ಕಿವಿ, ಮೂಗು ಮತ್ತು ಗಂಟಲು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ (ರಿ),
29, ಭೀಮ ಸಮುದ್ರ ರಸ್ತೆ,
ದವಳಗಿರಿ ಬಡಾವಣೆ, 2ನೇ ಹಂತ,
ಚಿತ್ರದುರ್ಗ, ಕರ್ನಾಟಕ, 577501
ಮೊಬೈಲ್ ಸಂಖ್ಯೆ: 9483519988
ಇ-ಮೇಲ್: prahladnb@gmail.com
www.kenthospitals.com

Voice Care Clinic at Karnataka ENT Hospital & Research Center, Chitradurga

Voice Care Clinic at Karnataka ENT Hospital & Research Center, ChitradurgaCaring for the Voice

Introduction

Your voice is your most valuable tool, especially if you’re a professional singer, actor, teacher, or public speaker. Caring for your voice ensures it remains healthy and effective, reducing the risk of strain or damage. This brochure provides essential tips and resources for maintaining a strong and resilient voice.

Understanding Your Voice

The voice is produced when air from the lungs passes through the vocal cords, causing them to vibrate. This sound is shaped by the throat, mouth, and nasal passages. Common issues that affect the professional voice include:

  • Vocal Strain: Overuse or misuse leading to hoarseness.
  • Laryngitis: Inflammation of the vocal cords.
  • Nodules/Polyps: Growths on the vocal cords due to prolonged strain.
  • Reflux: Stomach acid affecting the vocal cords.

Essential Voice Care Tips

  1. Hydration:
    • Drink plenty of water (6–8 glasses daily) to keep your vocal cords lubricated.
    • Use a humidifier if the air is dry.
  2. Warm-Up Exercises:
    • Begin each day with gentle vocal exercises.
    • Practice scales and breathing techniques to prepare for prolonged use.
  3. Avoid Vocal Strain:
    • Do not shout or whisper excessively; both can strain the vocal cords.
    • Use amplification devices when addressing large audiences.
  4. Rest Your Voice:
    • Schedule regular vocal breaks during extended speaking or singing.
    • Rest your voice if you experience fatigue or hoarseness.
  5. Avoid Irritants:
    • Stay away from smoking, alcohol, and caffeine, which can dehydrate and irritate the vocal cords.
    • Minimize exposure to pollutants, including dust and fumes.
  6. Healthy Lifestyle:
    • Maintain a balanced diet rich in fruits, vegetables, and whole grains.
    • Exercise regularly to improve lung capacity and overall health.
  7. Reflux Management:
    • Avoid late-night meals and spicy foods.
    • Elevate the head of your bed to prevent acid reflux during sleep.
  8. Monitor Symptoms:
    • Seek medical attention if you experience persistent hoarseness, pain, or a loss of vocal range.

Exercises for Voice Maintenance

  • Diaphragmatic Breathing: Strengthens breathing muscles and supports sustained vocalization.
  • Lip Trills: Helps relax facial and vocal muscles.
  • Humming: Warms up the vocal cords gently and promotes resonance.

When to Seek Professional Help

Visit an ENT specialist or speech-language pathologist if you notice:

  • Persistent hoarseness for more than two weeks.
  • Pain or discomfort when speaking or singing.
  • Loss of vocal range or difficulty in hitting certain notes.

Resources

Contact Us

If you have concerns about your voice or need personalized advice, please reach out to:

  • Karnataka ENT Hospital & Research Center (R)
  • Address: #29, Bheema Samudra Road, Davalagiri Extension, 2nd Stage, Chitradurga, 577501, Karnataka.
  • Phone: +91 – 9342310854.
  • Website: www.kenthospitals.com.

We’re here to help you maintain a healthy and professional voice.